Thursday, December 31, 2009

ಪ್ರೀತಿ ಎಂದರೆ ಏನರ್ಥ?

ನನ್ನ ಪ್ರೀತಿ....ಹುಚ್ಚು ಪ್ರೀತಿ.
ಕೆಲವರು ತಪ್ಪು ಎನ್ನಬಹುದು ಇನ್ನು ಕೆಲವರು ಬೆಪ್ಪು ಅನ್ನಬಹುದು ಆದರೆ ಇದನೆಲ್ಲ ಕೇಳಿಕೊಂಡು ಹುಟ್ಟುವುದು ಪ್ರೀತಿಯೇ?
ಯೆನೆನ್ನು ಮಾಡಿದರು ಕಡಿಮೆ ಆಗದು ಈ ಪ್ರೀತಿ. ಭಾವನೆಗಳು ಮೆಲುಕು ಹಾಕಿ ತಿದ್ದಿ ತಿರುಚಿ ನೀಡಿದರು ಬದಲಾಗದು. ಇದು ನನ್ನ ನಾಶ ಅಂತ ಗೊತಿದ್ದರು ಮನಸ್ಸು ಅವರನ್ನು ಮರೆಯದು. ಮರೆಯೋದು ಹೇಗೆ ತಾನೇ ಸಧ್ಯ? ಪ್ರತಿ ದಿನ ಕಣ್ಣ ಮುಂದೆ ಆ ವ್ಯಕ್ತಿ ಸುಲಿದಾಡುವಾಗ? ಅವರು ಕಣ್ಣಿಗೆ ಕಾಣದಾಗ ಅವರ ನೆನಪು ಮಾಸುವುದೇನೋ ಅಂದರೆ ಅವರು ದೂರ ಅದಾಗ, ಇನ್ನು ನೆನಪು ಜಾಸ್ತಿ , ಮತ್ತೆ ಯಾವಾಗ ಅವರನ್ನು ನೋಡುವೆನೋ ಅಂತ ತುಡಿತ. ಈ ಭಾವನೆಗಳೆಲ್ಲ ನನಗೆ ಹೊಸತು. ಕೈ ಹಿಡಿಯುವವರನ್ನು ನೋಡಿದಾಗಲೂ ಸುಲಿದಾಡದ ಭಾವನೆಗಳು ಇವು. ಈಗ ಒಂದು ಮಧುರವಾದ ಮಿಡಿತದಂತೆ ಮಿಡಿಯುತ್ತ ಇದೆ. ಯಾಕೆ ಏನು ಅನ್ನೋ ವಿಚಾರಗಳಿಗೆ ಮೀರಿ ನಿಂತ ಭಾವನೆಯಾಗಿ.
ಅವರ ಒಂದೊಂದು ಮಾತು ಒಂದೊಂದು ಕನಸಾಗಿ ಬೆಳೆಯುವಾಗ ಯಾವ ರೀತಿ ನನ್ನ ಮನಸ್ಸಿಗೆ ಬುದ್ಧಿ ಹೇಳಲಿ?
ಅವರಿಗೆ ತಿಳಿದಿಲ್ಲ ಅಂತ ನಾನು ಹೇಳೋಲ್ಲ. ಒಮ್ಮೊಮ್ಮೆ ಎಷ್ಟು ಭಾವನೆಗಳ ಗೊಂದಲ ಆಗತ್ತೆ ಅಂದ್ರೆ ಮುಖದ ಮೇಲೆ ಅದರ ಛಾಪು ಮೂಡಲು ಸಾಧ್ಯವೇ ಇಲ್ಲ. ಇನ್ನು ನನ್ನ ಮುಖ, ಮನಸ್ಸಿನ ಕನ್ನಡಿ. ಸುಖ ದುಃಖ ಎರಡು ವ್ಯಕ್ತ ಪಡಿಸುವ ನನ್ನ ಮುಖ ಇಂತಹ ಭಾವನೆಗಳನ್ನು ತೋರ್ಪಡಿಸದೆ ಇರಲು ಸಾಧ್ಯವೇ? ಬುಧ್ಧಿ ಅಂತು, ಯಾರಾದರು ಅವರ ಬಗ್ಗೆ ಮಾತಾಡಿದರೆ ಹಾರಿ ಬೀಳುವ ಹಾಗೆ. ಇನ್ನೇನು ಬಚ್ಚಿಡಲಿ ಅವರಿಂದ? ಹೇಗೆ ಮರೆಮಾಡಲಿ ? ಆದರೆ ಹೇಳಿ ಪ್ರಯೋಜನ ತಾನೇ ಏನು? ಏನು ತಾನೇ ಮಾಡಲು ಸಾಧ್ಯ? ಇಬ್ಬರು ಇರುವ ಪರಿಸ್ಥಿಯಲ್ಲಿ ಯಾರಿಗೂ ಏನೂ ಮಾಡಲು ಆಗೋದಿಲ್ಲ. ಮತ್ತೆ, ಅವರು ನನ್ನ ಇಷ್ಟ ಪಡುತ್ತಾರೆ ಅಂತ ಅಂದುಕೊಂಡರೆ ಅದು ನನ್ನ ಉದ್ದಟತನವೆ ಸರಿ. ಅವರೆಲ್ಲಿ, ನಾನೆಲ್ಲಿ? ಈ ಪ್ರೀತಿ ಮುಂದೆ ಒಂದು ದಿನ ವ್ಯಕ್ತಪಡಿಸಲು ಸಾಧ್ಯವಾದರೂ ನಾವಿಬ್ಬರು ವ್ಯಕ್ತ ಪಡಿಸುವುದಿಲ್ಲ. ನಾನುಅವರು ಹಾಗೆ. ಅದು ಗೊತಿದ್ದು ನನ್ನ ಮನಸ್ಸು ಸುಮ್ಮನಿರಬಾರದೆ?

ಭವಿಷ್ಯವೇ ಇಲ್ಲದ ಪ್ರೀತಿ ನನ್ನದು. ಅವರನ್ನು ದೂರದಿಂದ ನೋಡಿದರು ಸರಿಯೇ, ಇಷ್ಟಕ್ಕೂ ಮೋಸ ಆಗದೆ ಹೋದರೆ ಸಾಕು. ಜೀವನವೆಲ್ಲ ಹೀಗೆ ಕಳೆಯುವುದು ಕಷ್ಟಸಾಧ್ಯವಾದರು ದುರ್ಬರವಾಗಿರೋಲ್ಲ.

No comments:

Post a Comment